ಸಂಪರ್ಕಿಸಿ : +91 9874561230

ಪರಿಚಾರಕಗಳು

Creating Chariot

ರಥದ ನಿರ್ಮಾಣ

ರಥ ನಿರ್ಮಾಣದ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ನೆಡೆಸಿ ಬೇರೆ ಬೇರೆ ದೇವಸ್ಥಾನಗಳ ರಥ ನಿರ್ಮಾಣದ ಬಗ್ಗೆ ತಿಳಿದುಕೊಂಡವರು. ರಥ ನಿರ್ಮಾಣಕ್ಕೆ ಅಗತ್ಯವಾದ ಪ್ರೇರಕವಾದ ಗ್ರಹ ವಾಸ್ತು ದರ್ಪಣ ಮುಂತಾದ ಗ್ರಂಥದ ಮಾಹಿತಿಯನ್ನು ಕಲೆ ಹಾಕುತ್ತಾ ಅಧ್ಯಯನ ಮಾಡುತ್ತಾ ರಥ ತಯಾರಿಕೆಯಲ್ಲಿ ಮುಂದುವರಿದವರು. ಹಾಗಾಗಿ ಇವರ ರಥ ಶಿಲ್ಪದಲ್ಲಿ ಪರಂಪರಾಗತ ಶಿಲ್ಪವನ್ನು ಕಾಣಬಹುದು.

ರಥಕ್ಕೆ ಸ್ಟೇರಿಂಗ್ ಅಳವಡಿಕೆ

ಈ ಹಿಂದೆ ರಥವನ್ನು ಎಳೆಯುವಾಗ ಸಂದರ್ಭಕ್ಕೆ ಸರಿಯಾಗಿ ತಿರುಗಿಸಲು ಚುಕ್ಕಾಣಿಯನ್ನು ಬಳಸುತಿದ್ದರು. ಇದು ತ್ರಾಸದಾಯಕವಾಗಿರುತಿತ್ತು. ಆದಕಾರಣ ರಥಗಳಿಗೆ ಸ್ಟೇರಿಂಗ್ ಅಳವಡಿಸಿ ರಥವನ್ನು ಬೇಕಾದಲ್ಲಿಗೆ ತಿರುಗಿಸುವ ಆವಿಷ್ಕಾರವನ್ನು ಕಂಡುಹಿಡಿದು ಪ್ರಥಮವಾಗಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಬ್ರಹ್ಮರಥಕ್ಕೆ ಅಳವಡಿಸಲಾಗಿದೆ. ನಂತರ ಉಡುಪಿ, ಧರ್ಮಸ್ಥಳ ಮೊದಲಾದ ಹಳೆಯ ರಥಗಳಿಗೂ ಕೂಡ ಸ್ಟೇರಿಂಗ್ ಅಳವಡಿಸಿದಲ್ಲದೆ ಅರವತ್ತಕ್ಕೂ ಹೆಚ್ಚು ಹಳೆಯ ರಥಗಳಿಗೆ ಸ್ಟೇರಿಂಗ್ ಅಳವಡಿಸಲಾಗಿದೆ.

Add Geard
Renovation

ಹಳೆಯ ರಥದ ನವೀಕರಣ

ಐನೂರು ಆರುನೂರು ವರ್ಷದ ಹಿಂದಿನ ರಥದ ದುರಸ್ತಿ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ಮಾಡಲಾಗಿದೆ. ಇಂತಹ ಹಳೆಯ ರಥಗಳ ದುರಸ್ತಿ ಕಾರ್ಯದಲ್ಲಿ ಅಗತ್ಯವಿದ್ದಲ್ಲಿ ಸ್ಟೇರಿಂಗನ್ನು ಅಳವಡಿಸಲಾಗುವುದು.

ಬೆಳ್ಳಿಯ ರಥ, ಪಲ್ಲಕ್ಕಿ ಹಾಗೂ ದೇವಸ್ಥಾನದ ಪರಿಅಕರಗಳ ನಿರ್ಮಾಣ.

Add Geard