ಸಂಪರ್ಕಿಸಿ : +91 9874561230

ರಥದ ಬಗ್ಗೆ

about image

ರಥಗಳ ಕಲ್ಪನೆ ಅತ್ಯಂತ ಪುರಾತನವಾಗಿದ್ದು ರಗ್ವೇದದಲ್ಲಿ ಸೂರ್ಯ ದೇವರು ಬಳಸುತ್ತಿದ್ದ ದಿವ್ಯ ರಥದ ಉಲ್ಲೇಖವಿದೆ. ಏಕ ಚಕ್ರದ ಈ ರಥವು ಏಳು ಅಶ್ವಗಳನ್ನು ಹೊಂದಿದ್ದು ಈ ಏಳು ಅಶ್ವಗಳು ವಾರದ ಏಳು ದಿನಗಳನ್ನು ಸೂಚಿಸುತ್ತದೆ. ಮೆಸಪೊಟೇಮಿಯಾ ಸಂಸ್ಕೃತಿಯಲ್ಲಿ ಎರಡು ಗಾಲಿಗಳ ರಥ ಇದಿತ್ತೆಂದು ಗುರುತಿಸಲಾಗಿದೆ. ಕ್ರಮೇಣ ನಾಲ್ಕು ಚಕ್ರದ ರಥಗಳು ಅಸ್ತಿತ್ವಕ್ಕೆ ಬಂದವು.

ಶಿಲ್ಪಶಾಸ್ತ್ರದಲ್ಲಿ ಹಲವು ವೈವಿಧ್ಯಮಯ ಪ್ರಕಾರಗಳಿದ್ದು ರಥಶಿಲ್ಪವು ಒಂದು ಮೈನವಿರೇಳಿಸುವ ಕಲಾಪ್ರಕಾರವಾಗಿದೆ.

ರಥದ ಪಾವಿತ್ರ್ಯತೆ ವೇದ ಮಂತ್ರಕ್ಕೆ ಸಮನಾದದ್ದು ಎಂದು ಹೇಳಲಾಗಿದೆ. ರಥದ ಉಪಯೋಗವು ಜಗತ್ ಸ್ರಷ್ಟಿಯ ಕಾಲದಿಂದಲೇ ಪ್ರಾರಂಭವಾಗುತ್ತದೆ. ಜಗತ್ ಸ್ರಷ್ಟಿಕರ್ತ ಬ್ರಹ್ಮನು ಸಂಚಾರಕ್ಕೆ ರಥವನ್ನು ಬಳಸಿದ ಅದೇ ಬ್ರಹ್ಮರಥವೆಂದು ಹೆಸರಿಡಲಾಗಿದೆ. ಹೀಗೆ ರಥದ ನಿರ್ಮಾಣವು ಪ್ರಜಾಪ್ರತಿಯಿಂದಲೇ ಪ್ರಾರಂಭವಾಗುತ್ತದೆ.

ಕಾಲ ಕಳೆದಂತೆ ರಥ ನಿರ್ಮಾಣವು ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತಗೊಳ್ಳುವಂತಾಯಿತು. ಪುರಾಣಗಳಲ್ಲಿ ರಥಗಳ ವೈವಿಧ್ಯವನ್ನು ತಿಳಿಸಿ ಅವುಗಳ ಉಪಯೋಗದ ಬಗ್ಗೆ ವಿವರಿಸಲಾಗಿದೆ.

ದೇವಾಲಯಗಳಲ್ಲಿ ಬಳಸುತ್ತಿದ್ದ ರಥ (ತೇರು) ವಿನ್ಯಾಸದಲ್ಲಿ ನೆರವಾಗಿದ್ದು ದೇವಾಲಯವನ್ನು ಹೋಲುವಂತೆ ಇರುತ್ತದೆ. ಈ ತೇರು ಗತಿಶೀಲವಾದರೆ ದೇವಾಲಯವೇ ನಮ್ಮೆಡೆಗೆ ಬಂದಂತೆ ಭಾಸವಾಗುತ್ತದೆ.

ಪ್ರಾಚೀನ ಗ್ರಂಥದಲ್ಲಿ ನಿರೂಪಿಸಲಾದ ವೈವಿಧ್ಯಮಯ ರಥಗಳನ್ನು ಅಧ್ಯಯನದ ದ್ರಷ್ಟಿಯಿಂದ ಮೂರು ವಿಧವಾಗಿ ವರ್ಗಿಕರಿಸಿ ಹೇಳಬಹುದಾಗಿದೆ.

  • ದೇವಾಲಯದ ಉತ್ಸವಗಳಲ್ಲಿ ಬಳಸುವ ದೇಗುಲ ರಥಗಳು.

  • ದೇವತೆಗಳು, ಋಷಿಮುನಿಗಳು, ಬ್ರಾಹ್ಮಣರು, ಪಂಡಿತೋತ್ತಮರು, ಅಸುರರು, ಯಕ್ಷರು, ಕಿನ್ನರರು ಮುಂತಾದವರು ಬಳಸುತ್ತಿದ್ದ ವಿವಿಧ ಬಗೆಯ ರಥಗಳು.

  • ಕ್ಷತ್ರಿಯರು ಹಲವಾರು ಉದ್ದೇಶಗಿಳಿಗಾಗಿ ಬಳಸುತ್ತಿದ್ದ ರಥಗಳು.