ಸಂಪರ್ಕಿಸಿ : +91 9874561230

ರಥಶಿಲ್ಪಿಯ ಬಗ್ಗೆ

about image

ಭಾರತ ಶಿಲ್ಪಕಲೆಗಳ ತವರೂರು. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆ ದೇವಾಲಯಗಳ ತೊಟ್ಟಿಲು ಎಂದೇ ಕರೆಸಿಕೊಂಡಿದೆ. ಇಲ್ಲಿನ ಉಡುಪಿ ಜಿಲ್ಲೆಯ ಕೋಟೇಶ್ವರ ಮುಖ್ಯ ರಸ್ತೆಗೆ ಹೊಂದಿಕೊಂಡು ೧೯೬೦ ರಲ್ಲಿ ಶ್ರೀ ವಿಶ್ವಕರ್ಮಕರಕುಶಲ ಶಿಲ್ಪಕಲಾ ಶಾಲೆ ಎನ್ನುವ ಕಾರ್ಯಾಗಾರ ನಿರ್ಮಿಸಿಕೊಂಡು ರಥಗಳನ್ನು ಹಾಗು ಶಿಲ್ಪಕಲೆಗೆ ಸಂಬಂಧಪಟ್ಟ ಕೆಲಸಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ.

ಈ ಶಿಲ್ಪಕಲಾ ಶಾಲೆಯು ಈಗಿನ ಆಧುನಿಕತೆಗೆ ತಕ್ಕಂತೆ ಯಂತ್ರೋಪಕರಣಗಳನ್ನು ಹೊಂದಿದ್ದು ಯಾವುದೇ ರಥದ ಕೆಲಸವನ್ನು ನಿಭಾಯಿಸಲು ಸಾಮರ್ಥ್ಯ ಹೊಂದಿದೆ ಹಾಗೂ ಹತ್ತಾರು ಮಂದಿ ಶಿಲ್ಪಿಗಳಿಗೆ ಆಶ್ರಯ ತಾಣವಾಗಿದೆ.

ಈಗ ಶಿಲ್ಪಕಲಾ ಶಾಲೆಯಲ್ಲಿ ಒಂದೇ ಬಾರಿಗೆ ೩-೪ ರಥಗಳನ್ನು ತಯಾರು ಮಾಡುವ ಅನುಕೂಲತೆ ಇದೆ.